Ticker

6/recent/ticker-posts

⭕⭕⭕ಕೇರಳದಲ್ಲಿ ಸಾರ್ವಜನಿಕ ಮತ್ತು ಖಾಸಗಿ‌ ವಲಯಗಳ ಅಂತರರಾಜ್ಯ ಸ್ಟೇಜ್ ಕ್ಯಾರಿಯೇಜ್ ಓಡಾಟ ಮುಂದಿನ ಒಂದು ವರ್ಷಕ್ಕೆ ಸಂಪೂರ್ಣ ಸ್ಥಗಿತ;ರಾಜ್ಯದಲ್ಲಿ ಮುಂದಿನ ಒಂದು ವರ್ಷದವರೆಗೆ ಕೋವಿಡ್ ನಿಯಂತ್ರಣ ನಿಯಮಾವಳಿ ಜಾರಿ;ಕೇರಳ ಸಾಂಕ್ರಾಮಿಕ ಕಾಯಿಲೆ, ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19) ಹೆಚ್ಚುವರಿ ನಿಯಮಗಳು,2020' ಇಲ್ಲಿದೆ ಸಂಪೂರ್ಣ ಮಾಹಿತಿ



ಕೇರಳದಲ್ಲಿ ಸಾರ್ವಜನಿಕ ಮತ್ತು ಖಾಸಗಿ‌ ವಲಯಗಳ ಅಂತರರಾಜ್ಯ ಸ್ಟೇಜ್ ಕ್ಯಾರಿಯೇಜ್ ಓಡಾಟ ಮುಂದಿನ ಒಂದು ವರ್ಷಕ್ಕೆ ಸಂಪೂರ್ಣ ಸ್ಥಗಿತ;ರಾಜ್ಯದಲ್ಲಿ ಮುಂದಿನ ಒಂದು ವರ್ಷದವರೆಗೆ ಕೋವಿಡ್ ನಿಯಂತ್ರಣ ನಿಯಮಾವಳಿ ಜಾರಿ;ಕೇರಳ ಸಾಂಕ್ರಾಮಿಕ ಕಾಯಿಲೆ,  ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19) ಹೆಚ್ಚುವರಿ ನಿಯಮಗಳು,2020' ಇಲ್ಲಿದೆ ಸಂಪೂರ್ಣ ಮಾಹಿತಿ


ತಿರುವನಂತಪುರಂ;ಕೊರೊನಾ ವೈರಸ್ ಪಸರಣೆ ತಡೆಯುವ, ಸರಪಣಿ ಕಡಿಯುವ ಮತ್ತು ಹರಡುವಿಕೆ ಸಾಮರ್ಥ್ಯವನ್ನು ಕಡಿಮೆ ಹೊಳಿಸುವ ಪ್ರಯತ್ನದ ಭಾಗವಾಗಿ ಕೇರಳ ಸರಕಾರ ಭಾನುವಾರ ಸಾಂಕ್ರಾಮಿಕ ರೋಗಗಳ ಕಾಯಿದೆಯಡಿ, ರಾಜ್ಯದಲ್ಲಿ ಮುಂದಿನ ಒಂದು ವರ್ಷದವರೆಗೆ ಕೋವಿಡ್ ನಿಯಂತ್ರಣ ನಿಯಮಗಳನ್ನು‌ ಜಾರಿಗೆ ತಂದಿದೆ.


ಜಾಹೀರಾತು 

ಕೇರಳದಲ್ಲಿ ಕೊರೊನಾ ವೈರಸ್ ಪ್ರಕರಣ ದಿನೇ ದಿನೇ  ಹೆಚ್ಚುತ್ತಿರುವಂತೆ, ಸಾಂಕ್ರಾಮಿಕ ರೋಗ ತಡೆಗಟ್ಟುವ ಕ್ರಮದ ಭಾಗವಾಗಿ ಕಾರ್ಯ ನಿರ್ವಹಿಸಲು ರಾಜ್ಯ ಸರ್ಕಾರ ಭಾನುವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. 




'ಕೇರಳ ಸಾಂಕ್ರಾಮಿಕ ಕಾಯಿಲೆ,  ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19) ಹೆಚ್ಚುವರಿ ನಿಯಮಗಳು,2020' ಎಂದು ಕರೆಯಲ್ಪಡುವ ಹೊಸ ಕಾಯಿದೆ ಜಾರಿಗೆ ತಂದಿದೆ.ಈ ನಿಯಮದಡಿ ಒಂದು ವರ್ಷ ಅಂದರೆ ಜುಲೈ 2021ರವರೆಗೆ ಅಥವಾ ಸರಕಾರದ ಮುಂದಿನ ನಿರ್ದೇಶನದವರೆಗೆ ಜಾರಿಯಲ್ಲಿರುತ್ತದೆ.

ಈ ಕಾಯಿದೆಯಂತೆ ಜನರು ಮುಖಗವಚ(ಮಾಸ್ಕ್) ಧರಿಸಬೇಕಾಗುತ್ತದೆ.ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಮತ್ತು ಜುಲೈ 2021ರವರೆಗೆ ದೊಡ್ಡ ಮಟ್ಟದ ಸಭೆ ಸಮಾರಂಭ, ಆಟ ಕೂಟಗಳನ್ನು ನಡೆಸುವಂತಿಲ್ಲ..

ಈ ಎಲ್ಲಾ ನಿಯಮಗಳನ್ನು ಸಾರ್ವಜನಿಕರು ಸರಿಯಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಈ ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕೇರಳ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ, 2020 ರ ನಿಬಂಧನೆಗಳ ಪ್ರಕಾರ ಶಿಕ್ಷೆ ವಿಧಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ADVERTISE WITH US
SUDARSHANA HELP LINE -SWARGA 
Swarga Junction Vaninagar Road
Mob:9447653591
ಕೇರಳದಲ್ಲಿ 2021ರ ಜುಲೈ ತಿಂಗಳವರೆಗೆ ಪಾಲಿಸಬೇಕಾದ ನಿಯಮಗಳು ಈ ರೀತಿಯಾಗಿದೆ.

1. ಮಾಸ್ಕ್ / ಫೇಸ್ ಕವರ್ ಧರಿಸುವುದು

ಎಲ್ಲಾ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು, ಸಾರ್ವಜನಿಕರಿಗೆ ಪ್ರವೇಶವಿರುವ ಯಾವುದೇ ಸ್ಥಳ, ಎಲ್ಲಾ ರೀತಿಯ ವಾಹನಗಳ ಓಡಾಟ ಸಮಯದಲ್ಲಿ ಮಾಸ್ಕ್ / ಮುಖಗವಚದಿಂದ‌ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು.

2. ಸಾಮಾಜಿಕ ಅಂತರ

ಎಲ್ಲಾ ಸಾರ್ವಜನಿಕ ಸ್ಥಳ,  ಮತ್ತು ಕಾರ್ಯಕ್ರಮಗಳಲ್ಲಿ ಎಲ್ಲಾ ವ್ಯಕ್ತಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿಗಳಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

 3.ಮದುವೆ ಸಮಾರಂಭಗಳು

ಎಲ್ಲಾ ವಿವಾಹ ಸಮಾರಂಭಗಳಲ್ಲಿ ಮತ್ತು ಬಳಿಕ ನಡೆಯುವ‌ ಯಾವುದೇ ಕಾರ್ಯಕ್ರಮಗಳಲ್ಲಿ ನಿರ್ದಿಷ್ಟ ಅವಧಿಯಲ್ಲಿ ಭಾಗವಹಿಸುವವರ ಸಂಖ್ಯೆ  ಐವತ್ತು ಮೀರಬಾರದು.ಹಾಗೂ ಎಲ್ಲಾ ಸಮಾರಂಭಗಳಲ್ಲಿ ಎಲ್ಲಾ  ವ್ಯಕ್ತಿಗಳು ಸ್ಯಾನಿಟೈಸರ್, ಫೇಸ್ ಮಾಸ್ಕ್, ಮುಖಗವಚ ಧರಿಸಬೇಕು.ಎಲ್ಲಾ ವ್ಯಕ್ತಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿಗಳಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಮದುವೆ ಅಥವಾ ಕಾರ್ಯಕ್ರಮಗಳ ಸಂಘಟಕರು ಭಾಗವಹಿಸುವ‌ಜನರ ಬಳಕೆಗಾಗಿ ಸ್ಯಾನಿಟೈಸರ್ ಒದಗಿಸಬೇಕು.

 4. ಅಂತ್ಯಕ್ರಿಯೆ

ಅಂತ್ಯಕ್ರಿಯೆಯ ಕಾರ್ಯಗಳಲ್ಲಿ ನಿರ್ದಿಷ್ಟ ಅವಧಿಯಲ್ಲಿ ಭಾಗವಹಿಸುವವರ ಗರಿಷ್ಠ ಸಂಖ್ಯೆ ಇಪ್ಪತ್ತು ಮೀರಬಾರದು.ಮತ್ತು ಎಲ್ಲಾ  ವ್ಯಕ್ತಿಗಳು ಸ್ಯಾನಿಟೈಸರ್, ಫೇಸ್ ಮಾಸ್ಕ್, ಮುಖಗವಚ ಧರಿಸಬೇಕು.ಎಲ್ಲಾ ವ್ಯಕ್ತಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿಗಳಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಕೋವಿಡ್ ಶಂಕಿತ ಸಾವಿನ ಸಂದರ್ಭದಲ್ಲಿ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಹೊರಡಿಸಿದ ಸ್ಥಾಯಿ ಸೂಚನೆಗಳನ್ನು ಪಾಲಿಸಬೇಕು.

ADVERTISE WITH US

SUDARSHANA HELP LINE -SWARGA 
Swarga Junction Vaninagar Road
Mob:9447653591

 5.ಸಾಮಾಜಿಕ ಕೂಟ

ಸಂಬಂಧಿತ ಇಲಾಖೆಯ ಲಿಖಿತ ಅನುಮತಿಯಿಲ್ಲದೆ ಒಗ್ಗೂಡುವಿಕೆ, ಮೆರವಣಿಗೆಗಳು, ಧರಣಿ, ಸಭೆ, ಪ್ರದರ್ಶನ ಇತ್ಯಾದಿ ಒಳಗೊಂಡಂತೆ ಯಾವುದೇ ರೀತಿಯ ಸಾಮಾಜಿಕ ಕೂಟಗಳನ್ನು ನಡೆಸ ಕೂಡದು.ಲಿಖಿತ ಅನುಮತಿ ಇದ್ದಲ್ಲಿ ಈ ರೀತಿಯ  ಸಾಮಾಜಿಕ ಕೂಟದಲ್ಲಿ ಭಾಗವಹಿಸುವವರ ಸಂಖ್ಯೆ ಗರಿಷ್ಠ ಹತ್ತು ಜನರನ್ನು ಮೀರಬಾರದು.ಈ ರೀತಿಯ ಕೂಟದಲ್ಲಿ ಭಾಗವಹಿಸುವ ಎಲ್ಲಾ  ವ್ಯಕ್ತಿಗಳು ಸ್ಯಾನಿಟೈಸರ್, ಫೇಸ್ ಮಾಸ್ಕ್, ಮುಖಗವಚ ಧರಿಸಬೇಕು.ಎಲ್ಲಾ ವ್ಯಕ್ತಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿಗಳಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.


 6. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು

ಅಂಗಡಿಗಳು ಮತ್ತು ಇತರ ಎಲ್ಲ ವಾಣಿಜ್ಯ ಸಂಸ್ಥೆಗಳಲ್ಲಿ, ವ್ಯಕ್ತಿಗಳ ನಡುವೆ ಆರು ಅಡಿಗಳಷ್ಟು ಸಾಮಾಜಿಕ ಅಂತರವನ್ನು ಉಳಿಸಿಕೊಳ್ಳಲು ಕೋಣೆಯ ಗಾತ್ರವನ್ನು ಅವಲಂಬಿಸಿ ನಿರ್ದಿಷ್ಟ ಸಮಯದಲ್ಲಿ ಅನುಮತಿಸಲಾದ ಗರಿಷ್ಠ ವ್ಯಕ್ತಿಗಳು / ಗ್ರಾಹಕರ ಸಂಖ್ಯೆ ಇಪ್ಪತ್ತು ಮೀರಬಾರದು.

ಅಂಗಡಿಯಲ್ಲಿರುವ ಎಲ್ಲಾ ವ್ಯಕ್ತಿಗಳು ಮತ್ತು ಗ್ರಾಹಕರು ಫೇಸ್ ಮಾಸ್ಕ್/ ಮುಖ ಗವಚ ಧರಿಸಬೇಕು.ಮತ್ತು ವ್ಯಕ್ತಿಗಳ ನಡುವೆ ಆರು ಅಡಿಗಳಷ್ಟು ಸಾಮಾಜಿಕ ಅಂತರ‌ ಪಾಲಿಸುವಲ್ಲಿ ಗಮನ ವಿರಿಸಬೇಕು.ಅಂಗಡಿಯ ಮಾಲೀಕರು ಗ್ರಾಹಕರ ಬಳಕೆಗಾಗಿ ಸ್ಯಾನಿಟೈಸರ್ ಅನ್ನು ಒದಗಿಸಬೇಕು.

 7. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆಗೆ ನಿಷೇಧ

ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಅಥವಾ ಫುಟ್‌ಪಾತ್‌ನಲ್ಲಿ ಉಗುಳಬಾರದು.

8. COVID-19 ಜಾಗ್ರತಾ ಇ-ಪ್ಲಾಟ್‌ಫಾರ್ಮ್‌ನಲ್ಲಿ ನೋಂದಣಿ (https://covid19jagratha.kerala.nic.in/)

ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಮತ್ತು ವಿದೇಶದಿಂದ ಕೇರಳಕ್ಕೆ ಆಗಮಿಸಲು‌ COVID-19 ಜಾಗ್ರತಾ ಇ-ಪ್ಲಾಟ್‌ಫಾರ್ಮ್‌ನಲ್ಲಿ ನೋಂದಣಿ ನಡೆಸಬೇಕು.ಸಂಪರ್ಕ ಪತ್ತೆ ಹಚ್ಚುವಿಕೆ, ಕ್ವಾರಂಟೈನ್ ಖಾತರಿಪಡಿಸುವುದು ಮತ್ತು ಸಾಂಕ್ರಾಮಿಕ ರೋಗ ಹರಡುವ ಸಾಮರ್ಥ್ಯವನ್ನು ಕಡಿಮೆ ಮಾಡುವ ಕ್ರಮಗಳನ್ನು ಖಾತರಿ ಪಡಿಸಬೇಕು.

 9.ಅಂತರ-ರಾಜ್ಯ‌ ರಸ್ತೆ ಸಾರಿಗೆ

ಕೇರಳದಿಂದ ಇತರ ರಾಜ್ಯ ಮತ್ತು ಕೇರಳಕ್ಕೆ ಇತರ ರಾಜ್ಯದಿಂದ ಸಾರ್ವಜನಿಕ ಮತ್ತು ಖಾಸಗಿ‌ ವಲಯಗಳ ಸ್ಟೇಜ್ ಕ್ಯಾರೇಜ್ ರಸ್ತೆ ಸಾರಿಗೆ  ಕಾರ್ಯಾಚರಣೆ ಸಂಪೂರ್ಣ ಸ್ಥಗಿತ







Post a Comment

2 Comments