ಬೆಳ್ಳೂರು:ಬೆಳ್ಳೂರು ಗ್ರಾ.ಪಂ.ಗಡಿ ಬೀಜದಕಟ್ಟೆ ಸಮೀಪ ಎಣ್ಮಕಜೆ ಪಂಚಾಯಿತಿಗೆ ಸೇರಿದ ಪುಟ್ಟ ಪ್ರದೇಶ ಶಾಂತಿಯಡಿ ಹೆಸರಿಗೆ ಕಾರಣವಾದ ಸುಮಾರು ನಾಲ್ಕು ತಲೆಮಾರು ಇತಿಹಾಸದ ಬೃಹತ್ ಶಾಂತಿ ಮರ ಹಾಗೂ ಸಮೀಪದಲ್ಲೇ ತಂಪು ನೆರಳು ನೀಡುತ್ತಿದ್ದ ಮಾವಿನ ಮರ ಇನ್ನು ನೆನಪು ಮಾತ್ರ.
ಬದಿಯಡ್ಕ ಏತಡ್ಕ ಸುಳ್ಯಪದವು ರಸ್ತೆ ನವೀಕರಣ, ಅಗಲೀಕರಣದ ಭಾಗವಾಗಿ ಬೆಳ್ಳೂರು ಪಂಚಾಯಿತಿ ಬೀಜದಕಟ್ಟೆ ಸಮೀಪ ಎಣ್ಮಕಜೆ ಪಂಚಾಯಿತಿಯ ಶಾಂತಿಯಡಿ ಎಂಬ ಪ್ರದೇಶದ ಹೆಸರಿಗೆ ಕಾರಣವಾದ ಮೂರರಿಂದ ನಾಲ್ಕು ಶತಮಾನ ಇತಿಹಾಸದ ಬೃಹತ್ ಶಾಂತಿ ಮರವನ್ನು ಕಡಿದುರುಳಿಸಲಾಗಿದೆ.
ಬೀಜದಕಟ್ಟೆ ಅನುವತ್ತಡ್ಕ ಸಮೀಪದ ಶಾಂತಿಯಡಿಯ ಶಾಂತಿ ಮರ ಹಾಗೂ ಅದರ ಸಮೀಪದಲ್ಲೇ ರಸ್ತೆಯಲ್ಲೇ ಎದ್ದು ನಿಂತಂತೆ ಭಾಸವಾಗುತ್ತಿದ್ದ ಶತಮಾನ ಇತಿಹಾಸದ ಮಾವಿನ ಮರವನ್ನು ಬದಿಯಡ್ಕ ಏತಡ್ಕ ಸುಳ್ಯಪದವು ಜಿಲ್ಲಾ ಪ್ರಧಾನ ರಸ್ತೆಯ ನವೀಕರಣದ ಭಾಗವಾಗಿ ಕಡಿದುರುಳಿಸಲಾಗಿದೆ.
ಶಾಂತಿಯಡಿ ಶಾಂತಿ ಮರದ ಪಕ್ಕದಲ್ಲಿ ನೆರಳು ನೀಡುತ್ತಿದ್ದ ಮಾವಿನ ಮರವನ್ನೂ ಕಡಿದುರುಳಿಸಲಾಗಿದೆ.
ಬದಿಯಡ್ಕ ಏತಡ್ಕ ಸುಳ್ಯಪದವು 20 ಕಿ.ಮೀ. ರಸ್ತೆ, ಬದಿಯಡ್ಕ ಪಂಚಾಯಿತಿಯಿಂದ ಆರಂಭವಾಗಿ ಕುಂಬ್ಡಾಜೆ ಪಂಚಾಯಿತಿ, ಬೆಳ್ಳೂರು ಪಂಚಾಯಿತಿ, ಹಾಗೂ ಎಣ್ಮಕಜೆ ಪಂಚಾಯಿತಿಯ ಸಣ್ಣ ಭಾಗ, ಮತ್ತೆ ಬೆಳ್ಳೂರು ಪಂಚಾಯಿತಿಯ ಕಿನ್ನಿಂಗಾರು, ನೆಟ್ಟಣಿಗೆ ಮೂಲಕ ಕಾಯರುಪದವಿನಲ್ಲಿ ಕರ್ನಾಟಕ ಗಡಿ ಸುಳ್ಯಪದವು ಸೇರುತ್ತಿದೆ.
video
ಚಿತ್ರ, ವಿಡಿಯೋ ಕೃಪೆ:ನವಪ್ರಸಾದ್ ಏತಡ್ಕ
video
ಪ್ರಸ್ತುತ ನೇರಪ್ಪಾಡಿ ಸೇತುವೆಯಿಂದ ಏತಡ್ಕ ಹಾಗೂ ಏತಡ್ಕದಿಂದ ಸುಳ್ಯಪದವು ತನಕ ಎರಡು ಹಂತಗಳ ಕಾಮಗಾರಿ ನಡೆಯುತ್ತಿದ್ದು ರಸ್ತೆ ಅಗಲೀಕರಣದ ಭಾಗವಾಗಿ ಹಲವಾರು ಮರಗಳು ಧರೆಗುರುಳಿವೆ.ರಸ್ತೆ ಅಭಿವೃದ್ಧಿಯಾದರೆ ನಾಡು ಅಭಿವೃದ್ಧಿಯಾದಂತೆ ಎಂಬ ಮಾತು ಒಂದೆಡೆ, ಶತಮಾನ ಪೂರ್ವದ ಮರಗಳನ್ನುಉಳಿಸಿ ರಸ್ತೆ ನವೀಕರಣ ನಡೆಸಬಹುದಿತ್ತು ಎಂಬ ಮಾತು ಇನ್ನೊಂದೆಡೆ ಕೇಳಿ ಬರುತ್ತಿದೆ.
ADVERTISE WITH US
Swarga Junction Vaninagar Road
Mob:9447653591
SUDARSHANA NEWS
follow our social media for daily updates
Follow This Link To Join Sudarshana News WhatsApp group:
ಸುದರ್ಶನ ನ್ಯೂಸ್ ವಾಟ್ಸಪ್ ಗ್ರೂಪ್
Online News Portal
https://sudarshananews24.blogspot.com/?m=1
Facebook Group
https://www.facebook.com/groups/244478692969927/
Facebook Page
https://www.facebook.com/sudarshananews/
0 Comments