ಕಾಸರಗೋಡು:ಕೋವಿಡ್ 19 ಹಿನ್ನೆಲೆಯಲ್ಲಿ ಜು.31ಮತ್ತು ಆ.1ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲೂ ಬಿಗಿ ಕಟ್ಟುನಿಟ್ಟು ಸಹಿತ ಸಂಪೂರ್ಣ ಲಾಕ್ ಡೌನ್ ಇರುವುದಾಗಿ ಜಿಲ್ಲಾ ದುರಂತ ನಿವಾರಣಾ ಪ್ರಾಧಿಕಾರದ ಅಧ್ಯಕ್ಷೆ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಆದೇಶ ನೀಡಿದ್ದಾರೆ.ಈ ದಿನಗಳಲ್ಲಿ ಅಗತ್ಯ ಸಾಮಾಗ್ರಿಗಳ ಅಂಗಡಿಗಳ ಸಹಿತ ಅಗತ್ಯದ ಸೇವೆಗಳು ಮಾತ್ರ ಚಟುವಟಿಕೆ ನಡೆಸಬಹುದಾಗಿದೆ.
ಜಿಲ್ಲೆಯಲ್ಲಿ ತಪಾಸಣೆಯ ಸಂಖ್ಯೆ ಕಡಿಮೆಯಿದ್ದು, ಟೆಸ್ಟ್ ಪಾಸಿಟಿವಿಟಿ ರೇಟ್ ಹೆಚ್ಚಾಗಿರುವ ಪ್ರದೇಶಗಳ ಬಗ್ಗೆ ನಿಗಾ ಇರಿಸಲು ಪ್ರತ್ಯೇಕ ತಂಡವನ್ನು ನೇಮಿಸಲಾಗಿದೆ. ಪೊಲೀಸ್, ಆರೋಗ್ಯ, ಕಂದಾಯ, ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಸಿಬ್ಬಂದಿ, ಸೆಕ್ಟರ್ ಮೆಜಿಸ್ಟ್ರೇಟ್ ಗಳ ಸಹಿತ ಮಂದಿ ಈ ತಂಡದಲ್ಲಿದ್ದಾರೆ.ಈ ಪ್ರದೇಶಗಳಲ್ಲಿ ತಪಾಸಣೆಯ ಸಂಖ್ಯೆ ಕಡಿಮೆಗೊಳ್ಳಲು ಕಾರಣಗಳ ಕುರಿತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ತಂಡ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಿದೆ.
ತಂಡದ ಪ್ರತಿನಿಧಿಗಳಾಗಿ ಬ್ಲಾಕ್ ಮೆಡಿಕಲ್ ಆಫೀಸರ್, ಹೆಲ್ತ್ ಸೂಪರ್ ವೈಸರ್/ ಜೆ.ಎಚ್.ಐ. ಅವರು, ಪ್ರತ್ಯೇಕ ಮೊಬೈಲ್ ಟೆಸ್ಟಿಂಗ್ ಯೂನಿಟ್ ಇರಲಿದೆ.ಕಂದಾಯ ಇಲಾಖೆಯ ಪ್ರತಿನಿಧಿಗಳಾಗಿ ಆಯಾ ತಾಲೂಕಿನ ನಿಗದಿತ ಸಿಬ್ಬಂದಿ, ಸ್ಥಳೀಯಾಡಳಿತ ಸಂಸ್ಥೆಗಳಿಂದ ಪಂಚಾಯತ್/ ನಗರಸಭೆ ಕಾರ್ಯದರ್ಶಿ, ಆಡಳಿತೆ ಸಮಿತಿ ಪ್ರತಿನಿಧಿ, ಕುಟುಂಬಶ್ರೀ ಪ್ರತಿನಿಧಿ, ಸೆಕ್ಟರ್ ಮೆಜಿಸ್ಟ್ರೇಟ್, ಪೊಲೀಸ್ ಸಿಬ್ಬಂದಿ ಇರಲಿದ್ದಾರೆ.ಈ ತಂಡ ಎಲ್ಲಾ ಪ್ರದೇಶಗಳನ್ನೂ ಸಂದರ್ಶಿಸಿ ಅಲ್ಲಿ ಕೋವಿಡ್ ಪಾಸಿಟಿವ್ ಆಗಿರುವ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹೊಂದಿದ ಎಲ್ಲರನ್ನೂ, ಆಟೋ ಚಾಲಕರು, ಸರಕಾರಿ ಸಿಬ್ಬಂದಿ, ವ್ಯಾಪಾರಿಗಳು, ಅಂಗಡಿ, ರೆಸ್ಟಾರೆಂಟ್ ಇನ್ನತರ ವಾಣಿಜ್ಯ ಸಂಸ್ಥೆಗಳ ಸಿಬ್ಬಂದಿ, ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದಿರುವ ಮಂದಿಗಳ ತಪಾಸಣೆಯ ಕ್ರಮ ಕೈಗೊಳ್ಳುವರು.
ಜು.30ರಂದು ನಿಗಾ ತಂಡ ಚೆರುವತ್ತೂರು, ಪುಲ್ಲೂರು-ಪೆರಿಯ, ಚೆಮ್ನಾಡು, ಬೆಳ್ಳೂರು, ಚೆಂಗಳ, ಈಸ್ಟ್ ಎಳೆರಿ, ಕಿನಾನೂರು-ಕರಿಂದಳಂ, ಕಳ್ಳಾರ್ ಎಂಬ ಸ್ಥಳೀಯಾಡಳಿತ ಸಂಸ್ಥೆಗಳನ್ನು ಸಂದರ್ಶಿಸುವರು. 31ರಂದು ಉದುಮ, ಪಿಲಿಕೋಡ್, ವಲಿಯಪರಂಬ, ಕುಂಬ್ಡಾಜೆ, ಮಧೂರು, ಕಾಸರಗೋಡು, ಮುಳಿಯಾರು, ಕೋಡೋಂ-ಬೇಳೂರು, ಪನತ್ತಡಿ ಪಂಚಾಯತ್ ಗಳಿಗೆ ಭೇಟಿ ನೀಡಲಿದೆ.
ಕಾರ್ತಿಕೇಯ ನ್ಯೂ ಟಯರ್ಸ್ ಆಂಡ್ ವೀಲ್ ಅಲೈನ್ ಮೆಂಟ್ - ಪೆರ್ಲ
ADVERTISE WITH US
SUDARSHANA HELP LINE -SWARGA
Swarga Junction Vaninagar Road
Mob:9447653591
SUDARSHANA NEWS
follow our social media for daily updates
Follow This Link To Join Sudarshana News WhatsApp group:
ಸುದರ್ಶನ ನ್ಯೂಸ್ ವಾಟ್ಸಪ್ ಗ್ರೂಪ್
Online News Portal
Facebook Group
Facebook Page
0 Comments