ಕಾಸರಗೋಡು:ಕೋವಿಡ್ 19 ಲಾಕ್ ಡೌನ್ ಸಡಿಲಿಕೆ ಭಾಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲ ಕ್ಯಾಟಗರಿ ಪ್ರದೇಶಗಳಲ್ಲೂ ಅಕ್ಷಯ, ಜನಸೇವಾ ಕೇಂದ್ರಗಳ ಚಟುವಟಿಕೆಗೆ ಅನುಮತಿ ನೀಡಲಾಗಿದೆ.ಜಿಲ್ಲಾ ದುರಂತ ನಿವಾರಣಾ ಪ್ರಾಧಿಕಾರದ ಅಧ್ಯಕ್ಷೆಯೂ ಆಗಿರುವ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಆ ಬಗ್ಗೆ ಆದೇಶ ನೀಡಿದ್ದಾರೆ.ಎ,ಬಿ,ಸಿ, ಕ್ಯಾಟಗರಿ ಪ್ರದೇಶಗಳಲ್ಲಿ ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆ ವರೆಗೆ, ಡಿ ಕ್ಯಾಟಗರಿ ಪ್ರದೇಶಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಅಕ್ಷಯ, ಜನ ಸೇವಾ ಕೇಂದ್ರಗಳು ತೆರೆದು ಕಾರ್ಯಾಚರಿಸಬಹುದು.
ಫೊಟೋ ಸ್ಟುಡಿಯೋ
ಆಯಾ ಸ್ಥಳೀಯಾಡಳಿತ ಸಂಸ್ಥೆಗಳು ಅನುಮತಿ ನೀಡುವ ದಿನಗಳಲ್ಲಿ ಫೊಟೋ ಸ್ಟುಡಿಯೋ ತೆರೆದು ಕಾರ್ಯಾಚರಿಸಬಹುದು ಎಂದು ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಆದೇಶ ನೀಡಿದೆ.ನೀಟ್ ಪರೀಕ್ಷೆ ಸಂಬಂಧ ಅಗತ್ಯವನ್ನು ಪರಿಶೀಲಿಸಿ ಈ ಕ್ರಮ ಕೈಗೊಳ್ಳಲಾಗಿದೆ.ಬೀಜ, ಗೊಬ್ಬರ ಮಾರಾಟ ಅಂಗಡಿಗಳನ್ನು ಅಗತ್ಯ ಸೇವಾ ವಲಯದಲ್ಲಿ ಸೇರ್ಪಡೆಗೊಳಿಸಲಾಗಿದೆ. ಇಕನಾಮಿಕ್ಸ್ ಆಂಡ್ ಸ್ಟಾಟಿಸ್ಟಿಕ್ಸ್ ಇಲಾಖೆಯ ಪ್ರೈಸ್ ವಿಭಾಗವನ್ನು ಅಗತ್ಯ ಸೇವಾ ವಲಯದಲ್ಲಿ ಸೇರಿಸಲಾಗಿದೆ ಎಂದು ಪ್ರಾಧಿಕಾರದ ಆದೇಶದಲ್ಲಿ ತಿಳಿಸಲಾಗಿದೆ.
ADVERTISE WITH US
0 Comments