Ticker

6/recent/ticker-posts

⭕⭕⭕ ಇತಿಹಾಸ ಪ್ರಸಿದ್ಧ ಜಾಂಬ್ರಿ ಗುಹೆ ಪರಿಸರ ಸ್ವಚ್ಛತೆ | ಪುಣ್ಯ ಪ್ರಸಿದ್ಧ ಪ್ರೇಕ್ಷಣೀಯ ಭೂಮಿಯ ಸ್ವಚ್ಛತೆಗೆ ಪಾಣಾಜೆ, ಬೆಟ್ಟಂಪಾಡಿ, ಬೆಳ್ಳೂರು ಗ್ರಾಮಸ್ತರು ಸಾಥ್‌

 

ಪಾಣಾಜೆ/ಬೆಳ್ಳೂರು:ಕೇರಳ ಕರ್ನಾಟಕ ಗಡಿ ಭಾಗ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮೂಲಸ್ಥಾನ, ಶತಮಾನಗಳಿಂದಲೂ 12 ವರ್ಷಗಳಿಗೊಮ್ಮೆ ಜಾಂಬ್ರಿ ಗುಹಾ ಪ್ರವೇಶೋತ್ಸವ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತಿರುವ ಚೆಂಡೆತ್ತಡ್ಕ ಬಯಲು ಪರಿಸರವನ್ನು ಪಾಣಾಜೆ, ಬೆಟ್ಟಂಪಾಡಿ, ಬೆಳ್ಳೂರು ಗ್ರಾಮಸ್ತರು ಭಾನುವಾರ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು‌.


ಚೆಂಡೆತ್ತಡ್ಕ ಬಯಲಿನಲ್ಲಿ ಕೋಳಿ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮಲೀನಗೊಂಡಿದ್ದು ಮದ್ಯ, ಪಾನೀಯ, ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದ್ದು ಈ ಬಗ್ಗೆ ವಿಜಯ ಕರ್ನಾಟಕ ಸಹಿತ ಪತ್ರಿಕೆಗಳು  ವರದಿ ಮಾಡಿತ್ತು.

ಪಾಣಾಜೆ ಗ್ರಾ.ಪಂ. ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗ್ರಾಮಸ್ಥರ ಸಹಕಾರದಲ್ಲಿ ಸಾಂಕ್ರಾಮಿಕ  ರೋಗಗಳು ಹರಡದಂತೆ ಸ್ವಚ್ಛಭಾರತ ಯೋಜನೆ ಪರಿಕಲ್ಪನೆಯಂತೆ ಕೋವಿಡ್ -19ಮಾನದಂಡ ಅನುಸರಿಸಿ ಪುಣ್ಯ ಪ್ರಸಿದ್ಧ ಪ್ರೇಕ್ಷಣೀಯ ಭೂಮಿಯನ್ನು ಸ್ವಚ್ಛಗೊಳಿಸಲು ಸಂಪ್ಯ ಠಾಣಾಧಿಕಾರಿ ಹಾಗೂ ತಹಶೀಲ್ದಾರ್ ಅವರ ಅನುಮತಿ ಪಡೆದು ಪಾಣಾಜೆ, ಬೆಟ್ಟಂಪಾಡಿ, ಬೆಳ್ಳೂರು ಪಂಚಾಯಿತಿಯ ಗ್ರಾಮಸ್ತರು, ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳು ಸಹಿತ ನೂರಾರು ಮಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಜಾಂಬ್ರಿ ಪರಿಸರವನ್ನು ಸ್ವಚ್ಚಗೊಳಿಸಿದ್ದಾರೆ.
      ಕಾರ್ತಿಕೇಯ ನ್ಯೂ ಟಯರ್ಸ್ ಆಂಡ್ ವೀಲ್ ಅಲೈನ್ಮೆಂಟ್ - ಪೆರ್ಲದಲ್ಲಿ  ಶುಭಾರಂಭಗೊಂಡಿದೆ 

ಜಾಂಬ್ರಿ ಗುಹೆಯ ಬಳಿ ನಡೆದ ಸಭೆಯಲ್ಲಿ ಪಾಣಾಜೆ ಗ್ರಾಪಂ.ಅಧ್ಯಕ್ಷೆ ಭಾರತಿ ಭಟ್ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.ಸಿ.ಎ ಬ್ಯಾಂಕ್ ನಿರ್ದೇಶಕ ರವೀಂದ್ರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.ಪುತ್ತೂರು ಅರಣ್ಯ ಇಲಾಖೆಯ ಅರಣ್ಯ ರಕ್ಷಕ ನಿಂಗರಾಜ್, ದ.ಕ.ಹಾಲು ಒಕ್ಕೂಟ ಮಂಗಳೂರು ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಪಾಣಾಜೆ ಗ್ರಾ.ಪಂ.ಅಧ್ಯಕ್ಷೆ ಭಾರತಿ ಭಟ್, ಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಶ್ರೀಧರ ಎಂ., ಮಹಾಬಲೇಶ್ವರ ಭಟ್ ಗಿಳಿಯಾಲು, ಪಾಣಾಜೆಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್ ಕೆ.ಸದಸ್ಯರಾದ ಸುಭಾಷ್ ರೈ, ಜಯಶ್ರೀ, ಕೃಷ್ಣಪ್ಪ ಪೂಜಾರಿ, ಮೈಮುನತ್ ಉಲ್ ಮೆಹ್ರಾ, ಸುಲೋಚನಾ, ವಿಮಲ, ಮೋಹನ ನಾಯ್ಕ, ಮಾಜಿ ಅಧ್ಯಕ್ಶ ನಾರಾಯಣ ಪೂಜಾರಿ, ಅರಣ್ಯ ಇಲಾಖೆ ರಕ್ಷಕ ಉಮೇಶ್ ಕೆ.ಜೆ., ಅರಣ್ಯ ವೀಕ್ಷಕ ದೇವಪ್ಪ, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಸದಾಶಿವ ರೈ ಸೂರಂಬೈಲು, ಪಾಣಾಜೆ ಸಿಎ ಬ್ಯಾಂಕ್ ನಿರ್ದೇಶಕ ರವಿಶಂಕರ ಶರ್ಮ, ಬೆಳ್ಳೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಜಗೋಪಾಲ್ ಕೈಪಂಗಳ, ಎರ್ನಾಕುಳಂ ಖಾಸಗಿ ಐ ಟಿ  ಕಂಪೆನಿಯ ಸೋಶಿಯಲ್ ಮೀಡಿಯಾ ವ್ಯವಸ್ಥಾಪಕ ವಿನಯ್ ಕುಮಾರ್ ಪಡ್ರೆ, ಛಾಯಾಗ್ರಾಹಕ ಬೆಟ್ಟಂಪಾಡಿ ಕೋನಡ್ಕದ ವೇಣುಗೋಪಾಲ್, ಬಿ.ಬಿ.ಕ್ರಿಯೇಶನ್ ಪಾಣಾಜೆ  ಸದಸ್ಯರು, ಓಂ ಫ್ರೆಂಡ್ಸ್ ನೆಟ್ಟಣಿಗೆ ಸದಸ್ಯರು, ನಮ್ಮ ರಸ್ತೆ ನಮ್ಮ ಹಕ್ಕು ಗುಂಪಿನ ಸದಸ್ಯರು ಸಹಿತ ನೂರಾರು ಸಾರ್ವಜನಿಕರು ಭಾಗವಹಿಸಿದರು.

ಸುಮಾರು 40 ಎಕರೆ ವಿಸ್ತಾರದ ಚೆಂಡೆತ್ತಡ್ಕ ಬಯಲಿನ ಜಾಂಬ್ರಿ ಗುಹೆಯ ವಿಸ್ತಾರ ಪ್ರದೇಶದ ಕಳಂಜ ಗುಂಡಿ ಪ್ರದೇಶ ಹಾಗೂ ರಸ್ತೆ ಬದಿಗಳಲ್ಲಿ ಎಸೆಯಲಾದ ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿಗಳನ್ನು ಹೆಕ್ಕಿ ಗೋಣಿ ಚೀಲದಲ್ಲಿ ತುಂಬಿಸಿ ತ್ಯಾಜ್ಯ ಸಾಗಣೆ ವಾಹನದಲ್ಲಿ ಪಾಣಾಜೆ ಗುರಿಕ್ಕೇಲುವಿನ ವಿಲೇವಾರಿ  ಘಟಕಕ್ಕೆ ಸಾಗಿಸಲಾಯಿತು.

ಸ್ವಚ್ಚತಾ ಕಾರ್ಯಕ್ರಮದ ರುವಾರಿ,  ಹಿರಿಯರಾದ ಗಿಳಿಯಾಲು ಮಹಾಬಲೇಶ್ವರ ಭಟ್ ಫಲಾಹಾರ, ವಿದ್ಯಾ ಮಣ್ಣಂಗಳ ಹಾಗೂ ಉಮೇಶ್ ರೈ ಗಿಳಿಯಾಲು ಸಿಹಿತಿಂಡಿ ವ್ಯವಸ್ಥೆ ಮಾಡಿದರು. ಆರ್ಲಪದವು ರಾಧಾ ಮೆಡಿಕಲ್ಸ್ ಮಾಲಕ ಬಾಲಕೃಷ್ಣ ಭಟ್ ಕೈ ಕವಚ ನೀಡಿ ಸಹಕರಿಸಿದರು.ಪಾಣಾಜೆ ಗ್ರಾ.ಪಂ.ವತಿಯಿಂದ ಜಾಂಬ್ರಿ ಗುಹೆಯ ಪರಿಸರದಲ್ಲಿ ತ್ಯಾಜ್ಯ ಹಾಕಲು ಕಸದ ತೊಟ್ಟಿ ಇರಿಸಲಾಗಿದೆ‌.ಖ್ಯಾತ ಚಿತ್ರ ಕಲಾಕಾರ ಯೊಗೀಶ್‌ ಕಡಂದೇಲು ಅವರ ಮನಮೋಹಕ ವಿನ್ಯಾಸ ಗಮನ ಸೆಳೆಯುವಂತಿದೆ


    
 ADVERTISE WITH US

   SUDARSHANA HELP LINE -SWARGA 
   Swarga Junction Vaninagar Road
   Mob:9447653591
SUDARSHANA NEWS

follow our social media for daily updates
Follow This Link To Join Sudarshana News WhatsApp group:
ಸುದರ್ಶನ ನ್ಯೂಸ್ ವಾಟ್ಸಪ್ ಗ್ರೂಪ್


Post a Comment

0 Comments