ತಿರುವನಂತಪುರಂ:ಕೇರಳದಲ್ಲಿ ನವೆಂಬರ್ 1ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಚ್ಚಿದ ಶಾಲೆಗಳು ಸುಮಾರು ಒಂದೂವರೆ ವರ್ಷದ ನಂತರ ಮತ್ತೆ ತೆರೆಯಲಿವೆ.ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಶಾಲೆಗಳ ಪುನರಾರಂಭದ ಕುರಿತು ನಿರ್ಣಾಯಕ ನಿರ್ಧಾರ ಕೈಗೊಳ್ಳಲಾಗಿದೆ.
ಒಂದರಿಂದ ಏಳನೇ ತರಗತಿ ಹಾಗೂ 10 ಮತ್ತು 12 ನೇ ತರಗತಿಗಳು ನವೆಂಬರ್ 1 ರಿಂದ ಆರಂಭವಾಗಲಿವೆ ಎಂದು ಮುಖ್ಯಮಂತ್ರಿ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.ನವೆಂಬರ್ 15 ರಿಂದ ಎಲ್ಲಾ ತರಗತಿಗಳ ಆರಂಭಕ್ಕೆ ಸಿದ್ಧತೆ ನಡೆಸಲು ಮತ್ತು ಹದಿನೈದು ದಿನಗಳ ಮುಂಚಿತವಾಗಿ ಸಿದ್ಧತೆಗಳನ್ನು ಪೂರ್ಣಗೊಳಿಸಲು ನಿರ್ದೇಶಿಸಲಾಗಿದೆ.ಪ್ರಾಥಮಿಕ ತರಗತಿಗಳನ್ನು ಮೊದಲು ತೆರೆಯುವಂತೆ ಆರೋಗ್ಯ ತಜ್ಞರು ಸೂಚಿಸಿದ್ದಾರೆ.ಶಾಲೆಗಳ ಪುನರಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಲು ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿ ಸಭೆ ನಡೆಸಲಿದೆ.
ರೋಗ ಪ್ರತಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳು ಶಾಲೆಗೆ ಹೋಗದಿರುವುದು, ವಾಹನಗಳಲ್ಲಿ ಮಕ್ಕಳನ್ನು ಸಾಗಿಸುವಾಗ ಪಾಲಿಸ ಬೇಕಾದ ವ್ಯವಸ್ಥೆಗಳ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು.ಎಲ್ಲಾ ಶಾಲೆಗಳು ಶಾಲಾ ಆರೋಗ್ಯ ಕಾರ್ಯಕ್ರಮ (ಹೆಲ್ತ್ ಪ್ರೋಗ್ರಾಂ)ವನ್ನು ಪುನಃ ಸ್ಥಾಪಿಸಲು ಮತ್ತು ಶಾಲೆಗಳು ತೆರೆದಾಗ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಮಕ್ಕಳಿಗಾಗಿ ವಿಶೇಷ ಮಾಸ್ಕ್ ತಯಾರಿಸಲಾಗುವುದು.ಶಾಲೆಗಳಲ್ಲಿ ಮಾಸ್ಕ್ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯ ಮಂತ್ರಿ ನಿರ್ದೇಶಿಸಿದ್ದಾರೆ.
ಕೇರಳದಲ್ಲಿ ಕೋವಿಡ್ ಹರಡುವಿಕೆ ಕಡಿಮೆಯಾಗುತ್ತಿದೆ. ಕೇರಳ ಸರಕಾರ ಸೆಪ್ಟೆಂಬರ್ 30 ರೊಳಗೆ 18 ವರ್ಷ ಪೂರ್ತಿಯಾದ ಎಲ್ಲರಿಗೊ ಮೊದಲ ಡೋಸ್ ಲಸಿಕೆ ನೀಡುವ ಗುರಿ ಹೊಂದಿದೆ.ಶೇ.82 ಮೊದಲ ಹಂತದ ಲಸಿಕೆ ಪೂರ್ಣಗೊಂಡಿದೆ.ಶಾಲೆಗಳನ್ನು ತೆರೆಯುವ ವಿಷಯ ಚರ್ಚೆಯಲ್ಲಿದೆ ಎಂದು ಮುಖ್ಯಮಂತ್ರಿಗಳು ಕಳೆದ ವಾರ ಸ್ಪಷ್ಟಪಡಿಸಿದ್ದರು.
ADVERTISE WITH US
0 Comments